Thursday, September 13, 2012

ಬಂಡೆ - ಕಾರಂಜಿ

ಜನ ನಮಗೆ ಬೇಕಾಗುವ ಹಾಗೆ ನಮ್ಮನ್ನು ನಡೆಸಿಕೊಳ್ಳಲಿಲ್ಲ ಟ್ರೀಟ್ ಮಾಡಲಿಲ್ಲ ಅಂದರೆ ನಾವು ಕೂಡ ಕೆಟ್ಟದಾಗಿ ನಡೆದುಕೊಳ್ಳಬೇಕಾ? ಅಥವಾ ಯಾರು ಏನೇ ಮಾಡಿದರೂ ನಾವು ಒಳ್ಳೆಯವರಾಗೆ ಇರಬೇಕಾ .. ಒಫ್ಕೌರ್ಸೆ ಸಂದರ್ಭದ ಮೇಲೆ ಅವಲಂಬಿಸಿರಬಹುದು .... ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಎಷ್ಟರ ಮಟ್ಟಿಗೆ ಭಾವನಾತ್ಮಕವಾಗಿ  ಡಿಪೆಂಡ್ ಆಗಬಹುದು ಅನ್ನೋದು ತುಂಬಾ ಕ್ಲಿಷ್ಟವಾದ ಪ್ರಶ್ನೆ ? ಆಗಲೇ ಬೇಕೇ ? ಅಥವಾ ಆಗದೆ ಇರಬಹುದೇ? ಅದು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿಸಿರತ್ತೆ ಅಂದುಕೊಳ್ಳಬಹುದೇನೋ... ಆದರೂ ಯಾವದೇ ತರಹದ ಅವಲಂಬನೆಯೀ ಇಲ್ಲದ ವ್ಯಕ್ತಿಯನ್ನ ನಾನು ಇದುವರೆಗೂ ನೋಡಿದ್ದಿಲ್ಲ .... ಕೆಲವರು ಅಥವಾ ನನ್ನಂಥವರು ಇದ್ದರೂ  ಇಲ್ಲ ಅನ್ನುವ ಹಾಗೆ ನಟಿಸುತ್ತೆವೆಯೇ ಹೊರತು ಇಲ್ಲವೇ ಇಲ್ಲ ಎಂದಿಲ್ಲ... ಹಾಗೆ ನೋಡಿದರೆ ನಾನು ಒಬ್ಬ ಮನುಷ್ಯನನ್ನು ಹಚ್ಚಿಕೊಳ್ಳುವುದು ಕಮ್ಮಿ ... ಏಕೆಂದರೆ ಒಂದಲ್ಲ ಒಂದು ದಿನ ಅವರು ಬಿಟ್ಟು ಹೋಗುತ್ತಾರೆ ,ಅವರ ಪಾತ್ರ ಮುಗಿದ ದಿನ ಹೇಳ ಹೆಸರಿಲ್ಲದಂತೆ .. ಪರಿಚಯ ಇದ್ದಿದ್ದೆ ಸುಳ್ಳು ಎಂಬಂತೆ ಮಾಯವಾಗುತ್ತಾರೆ...ಎಂಬುದು ನನಗೆ ಗೊತ್ತು... ಯಾರನ್ನು ಹಿಡಿದಿಟ್ಟುಕೊಳ್ಳುವುದು ಮೂರ್ಖತನ ಅನ್ನುವುದೂ ಗೊತ್ತು... ಅದಕ್ಕೆ ನಾನು ನನ್ನ ಪಾಡಿಗೆ ನಾನು ಒಬ್ಬಳೇ ಇರುವುದು ನನ್ನ ಸ್ವಭಾವ... ಆದರೂ ಒಂದೊಂದು ಬಾರಿ (ಒಂದೊಂದೇನು ಪ್ರತಿ ಸಲವೂ ) ಎಲ್ಲಿಂದಲೋ ಹುಟ್ಟಿಕೊಳ್ಳುತ್ತವೆ ಈ ಬಾಂಧವ್ಯಗಳು. ಬೇಡ ಅಂತ ದೂರ ಓಡಿದಷ್ಟೂ ಸುತ್ತಿಕೊಳ್ಳುತ್ತವೆ... ನಾನು ಯಥಾ ಪ್ರಕಾರ ತುಂಬಾನೇ ಪ್ರಾಮಾಣಿಕವಾಗಿ ನನ್ನಿಂದ ಹೇಗೆ ಸಾಧ್ಯವೋ ಹಾಗೆ ಇರುತ್ತೇನೆ ... ಯಾವತ್ತೋ ಒಂದು ದಿನ ಇದ್ದಕ್ಕಿದ್ದಂತೆ ಅನ್ನಿಸುವುದಕ್ಕೆ ಶುರು ಆಗತ್ತೆ ... ಈ ವ್ಯಕ್ತಿ ನನ್ನನ್ನ ದೂರ ತಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ ಎಂದು ... ಅದು ಬರೇ ನನ್ನ ಕಲ್ಪನೆ ಆಗಿರಬಹುದು ಅಥವಾ ಮುಂದೆ  ನಡೆಯಬಹುದಾದ ಸಂದರ್ಭಗಳ ಮುನ್ಸೂಚನೆಯೂ ಇರಬಹುದು ... ಆಗ ನಾನು ಯೋಚನೆ ಮಾಡುವುದಕ್ಕೆ ಶುರುವಿತ್ತುಕೊಲ್ಲುತ್ತೇನೆ ... ನಾನೇನಾದರೂ ತುಂಬಾ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿ ಮಾಡಿದ್ದೀನಾ? ಆ ಯೋಚನೆಯಲ್ಲೇ ಆ ವ್ಯಕ್ತಿ ಇಂದ ಸ್ವಲ್ಪ ಸ್ವಲ್ಪವಾಗಿ ದೂರ ಇದ್ದು ವಿಶ್ಲೇಷಣೆ ಮಾಡುತ್ತೇನೆ ... ಆಗ ಜನ ಇದ್ದಕ್ಕಿದ್ದಂತೆ ನೀನು ಮೊದಲಿನ ಹಾಗಿಲ್ಲ ? ಬದಲಾಯಿಸಿಬಿಟ್ಟಿದ್ದೀಯ
ಅಂತ ನನ್ನ ಹತ್ತಿರ ಹೇಳುತ್ತಾರೆ .. ನೀನು ಬೇರೆ ಹುಡುಗಿಯರಂತಲ್ಲ ಅಂದುಕೊಂಡಿದ್ದೆ .. ಆದರೆ ನಿನಗೂ ಬೇರೆ ಹುಡುಗಿಯರಿಗೂ ಏನೇನು ವೆತ್ಯಾಸವಿಲ್ಲ ... ಅಂತೇನೇನೋ ಹೇಳುತ್ತಾರೆ ..  ನಾನು ಪ್ರತಿ ಬಾರಿಯೂ ಒಂದಿಷ್ಟು ತಲೆ ಕೆಡಿಸಿಕೊಂಡು ನಾನೇ ಸರಿ ಇಲ್ಲವೇನೋ ಅಂದುಕೊಂಡು ಇದ್ದುಬಿಡುತ್ತೇನೆ.. ಆದರೆ ಎಲ್ಲ ಹುಡುಗಿಯರ ಸಹಜ ಪ್ರವೃತ್ತಿ ಒಂದೇ ಅಲ್ಲವೇ ? ನಾನು ಎಲ್ಲರಂತಲ್ಲ ಅಂತ ಜನ ಅಂದುಕೊಂಡದ್ದು ನನ್ನ ತಪ್ಪೇ? ಅಥವಾ ನಾನೇದರೂ ಹೇಳಿದ್ದೇನೆ ನಾನು ಎಲ್ಲರಂತಲ್ಲ ? ನಾನೇ ಬೇರೆ ಅಂತ ...  ಅಥವಾ ಏನೇ ಆದರೂ ನಾನು ಭಾವನೆಗಳನ್ನು ಹೊರಹಾಕದೆ ಸ್ಥಿತಪ್ರಜ್ಞ ಳಾಗಿ ಇರಬೇಕೆ? ಹಂಗಿದ್ದೂ ನೋಡಿದ್ದಾಗಿದೆ .. ನೀನು ಕಲ್ಲು ಬಂಡೆ ಅಂತ ಕೇಳಿದ್ದೂ ಆಗಿದೆ.... ಹೋಗಲಿ ಹಾಗಿರೋದು ಬೇಡ ಏನಾದರು ಭಾವನೆಗಳನ್ನ ಹೊರಹಾಕುವ ಅಂದರೆ .. ಒಳ್ಳೆ ಚಿಕ್ಕ ಮಕ್ಕಳ ತರಹ ಆಡುತ್ತೀಯ ಅನ್ನೋದು... (ನಗು)  
ಇದ್ದಕ್ಕಿದ್ದಂತೆ ಎಲ್ಲ ಮುಗಿದುಹೋಗುವುದು ಎಂದರೆ ಇದೇ ಇರಬಹುದು ... ನನಗೆ ಇದುವರೆಗೂ ಆಪ್ತರಾಗಿ ಒಂದಿಷ್ಟು ದಿನ ಇದ್ದು ಕೊನೆಗೆ ದೂರ ಆದವರೆಲ್ಲರೂ .. ದೂರ ಆಗುವ ಮುಂಚೆ ನನ್ನಿಂದಲೇ ಎಲ್ಲ ಕೆಟ್ಟಿದ್ದು, ಹಾಳಾಗಿದ್ದು ಅನ್ನುವುದನ್ನ ಮಾತ್ರ ಹೇಳಿ ಹೋಗುತ್ತಾರೆ (ನಗು)... ಅರೆ ನಾನೇನು ಮಾಡಿದೆ ಅಂತ ಕೇಳಿದರೆ ಮಾತ್ರ ಏನು ಹೇಳುವುದಿಲ್ಲ .. ನಿನಗೆ ಅರ್ಥ ಆಗಬೇಕು... ನಿಂಗು ಬುದ್ಧಿ ಇದೆ ಎನ್ನುವ ಮಾತು ಬೇರೆ .. ನಾನು ಮನಸ್ಸು ನಗುತ್ತಾ ಸಮಾಧಾನ ಮಾಡಿಕೊಳ್ಳುತ್ತದೆ... ಈ ಮನುಷ್ಯ ತನ್ನದೇನೋ ಕೆಲಸ ನನ್ನಿಂದ ಆಗಬೇಕಾಗುವ ತನಕ ನನ್ನನ್ನ ಹೊಗಳಿದ ಈಗ ಮುಗಿಯಿತು ಹೋಗುತ್ತಿದ್ದಾನೆ ... ನೀನು ನೀನಾಗೆ ಇರು ... ಜಗತ್ತೇನೆ ಅಂದರೂ... ಬಂಡೆ ಆಗಬೇಕೆನಿಸಿದಾಗ ಬಂಡೆ ಭಾವೆನಗಳ ಕಾರಂಜಿ ಹರಿಸಬೇಕೆನಿಸಿದಾಗ ಕಾರಂಜಿ ... 

No comments: