Friday, January 21, 2011

ಅನ್ವೇಷಣ

ನಮ್ಮ ಮನಸ್ಸಿನಲ್ಲಿ ನಡೆಯುವ ವಿಚಾರವನ್ನು ಯಾರಿಗೂ ಸರಿಯಾಗಿ ಬಿಡಿಸಿ ಹೇಳಲು ಶಕ್ಯವಿಲ್ಲ.ವಿಚಿತ್ರ ಅಂದರೆ ಮತ್ತೊಬ್ಬರಿಗೆ ಹೇಳುವಾಗ ನಾವೇ ನಮ್ಮ ವಿಷಯವಾಗಿ ಎಲ್ಲ ಉತ್ಪ್ರೇಕ್ಷೆ ಮಾಡಿಕೊತ್ತೀವಿ.ಆ ಕೇಳುವವನ ಸಹಾನುಭೂತಿ ಗಳಿಸಲಿಕ್ಕೆ ಅವನ ಕಣ್ಣಿನಲ್ಲಿ,ನಾವೇ ಯೋಗ್ಯರು ಅನ್ನಿಸಿಕೊ ಳ್ಳಲಿಕ್ಕೆ .ಬೇಕಾದರೆ ಹಂಗೆ ನಮ್ಮ ಚಿತ್ರವನ್ನು ತಿದ್ದಿ ತಿದ್ದಿ ವಿಷಯವನ್ನು ನಿರೂಪಿಸುತ್ತೀವಿ .ತೀರ ಆತ್ಮೀಯ ಸ್ನೇಹಿತನ ಹತ್ತಿರ ನಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳಬಹುದು ,ಆದರೆ ಅದು ಕೂಡ ಅವನ ಅಂತಃಕರಣವನ್ನು ಗೆಲ್ಲುವ ಒಳ ಉದ್ದೇಶದಿಂದ ಕೂಡಿರುತ್ತದೆ.ಹೊರಗಿನೋರಿಗೆ ನಾವು ನಿಜ ಹೇಳಲಿಕ್ಕೆ ಸಾಧ್ಯವಿಲ್ಲ.ಅದೇನಿದ್ದರೂ ನಮಗೆ ನಾವು ಮಾತ್ರ ಹೇಳಿಕೊಳ್ಳಬಹುದು.ಆದ್ದರಿಂದ ಒಳಗಿನಿಂದ ಏನಾದರು ಕಲಕಿದಾಗ ಒಂದು ಪುಸ್ತಕದಲ್ಲಿ ಬರೆದಿಟ್ಟು ಒತ್ತಡ ಕಳೆದುಕೊಂದುಬಿಡೋದೇ ಸೂಕ್ತ,ಡೈರಿ ಮುಂದೆ ಪ್ರಕಟವಾಗದ ಮತ್ತೊಬ್ಬರ ಕೈಲಿ ಬೀಳತ್ತೆ,ಬೀಳಲಿ ಅಂಬೋ ಆಶಇದ್ದರೆ ಮತ್ತೆ ಅದು ಸುಳ್ಳಿನ ಸುರುಳಿಯಾಗತ್ತೆ.ಡೈರಿಯನ್ನು ಯಾರೂ ಎಂದೂ ಪ್ರಕತಮಾಡ ತಕ್ಕದ್ದಲ್ಲ.ಸಾಯುವ ಮುಂಚೆ ಸುಟ್ಟು ಭಸ್ಮ ಮಾಡಿ ಬೂದಿಯನ್ನು ನೀರಿನಲ್ಲಿ ಕದಡಿ ಬಿದತಕ್ಕದ್ದು . ಬರಿ ಹುಟ್ಟಿದರೆ ಸಾಲದು, ಸತ್ತು ಹುಟ್ಟಬೇಕು ಆಗ ಜೀವನದ ಬೆಲೆ ಅರ್ಥವಾಗುತ್ತೆ .

No comments: